ಅದೃಶ್ಯವಾಗಿ ಹಾದುಹೋಗುವ ಸಮಯವನ್ನು ನೋಡಲು ಗಡಿಯಾರಗಳನ್ನು ಕಂಡುಹಿಡಿದಂತೆಯೇ, ಅದೃಶ್ಯ ಆಧ್ಯಾತ್ಮಿಕ ಲೋಕದಲ್ಲಿ ಪರಲೋಕ ಅಥವಾ ನರಕಕ್ಕೆ ಹೋಗುವ ತೀರ್ಪನ್ನು ನಾವು ಸತ್ಯವೇದದ ಮೂಲಕ ನೋಡಬಹುದು.
ಬೆಳಕಾಗಿ ಬಂದ ಯೇಸು ಮೆಲ್ಕಿಜೆದೇಕನ ತರಹದವನಾಗಿ ಬಂದ ಕಾರಣ, ಅವರ ಹಿಂಬಾಲಕರಾದ ಚರ್ಚ್ ಆಫ್ ಗಾಡ್’ನ ಸದಸ್ಯರು ಸಹ ಹೊಸ ಒಡಂಬಡಿಕೆಯ ಪಸ್ಕವನ್ನು ಆಚರಿಸುತ್ತಾರೆ ಮತ್ತು ಆತನ ಬೋಧನೆಗಳನ್ನು ಅನುಸರಿಸುತ್ತಾರೆ.
ಎರಡು ಸಾವಿರ ವರ್ಷಗಳ ಹಿಂದೆ, ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿತ್ತು - ಶರೀರದಲ್ಲಿ ಬಂದ ಯೇಸುವನ್ನು ತಮ್ಮ ರಕ್ಷಕನಾಗಿ ನಂಬಿದವರು ಮತ್ತು ನಂಬದವರು ಹಾಗೂ ಪವಿತ್ರಾತ್ಮನ ಕಾಲದಲ್ಲಿ, ಆತ್ಮನೂ ಮದಲಗಿತ್ತಿಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರನ್ನು ನಂಬುವವರು ಮತ್ತು ನಂಬದವರು ಇದ್ದಾರೆ.
ಈ ನಂಬಿಕೆಯ ಆಧಾರದ ಮೇಲೆ ದೇವರ ನ್ಯಾಯತೀರ್ಪು ಈಗಾಗಲೇ ನಿರ್ಧರಿಸಲ್ಪಟ್ಟಿದೆ ಎಂದು ಸತ್ಯವೇದವು ಹೇಳುತ್ತದೆ.
ಆ ತೀರ್ಪು ಏನಂದರೆ - ಬೆಳಕು ಲೋಕಕ್ಕೆ ಬಂದಿದ್ದರೂ ಮನುಷ್ಯರ ಕೃತ್ಯಗಳು ಕೆಟ್ಟವುಗಳಾಗಿರುವದರಿಂದ ಅವರು ಬೆಳಕಿಗಿಂತ ಕತ್ತಲೆಯನ್ನೇ ಹೆಚ್ಚಾಗಿ ಪ್ರೀತಿಸಿದರು.
ಕೆಟ್ಟದ್ದನ್ನು ಮಾಡುವವರು ಬೆಳಕನ್ನು ಸಹಿಸುವದಿಲ್ಲ, ತಮ್ಮ ಕೃತ್ಯಗಳು ದುಷ್ಕೃತ್ಯಗಳಾಗಿ ತೋರಿಬಂದಾವೆಂದು ಬೆಳಕಿಗೆ ಬರುವದಿಲ್ಲ;
ಆದರೆ ಸತ್ಯವನ್ನು ಅನುಸರಿಸಿ ನಡೆಯುವವನು ತಾನು ದೇವರಿಂದ ನಡಿಸಿಕೊಂಡು ತನ್ನ ಕೃತ್ಯಗಳನ್ನು ಮಾಡಿದ್ದೇನೆಂದು ತೋರಿಬರುವಂತೆ ಬೆಳಕಿಗೆ ಬರುತ್ತಾನೆ.
ಯೋಹಾನನು 3:19-21
ನಾವು ಆತನಿಂದ ಕೇಳಿ ನಿಮಗೆ ತಿಳಿಸುವ ವಾರ್ತೆ ಯಾವದಂದರೆ ದೇವರು ಬೆಳಕಾಗಿದ್ದಾನೆ; ಮತ್ತು ಆತನಲ್ಲಿ ಎಷ್ಟು ಮಾತ್ರವೂ ಕತ್ತಲೆಯಿಲ್ಲ ಎಂಬದೇ.
1 ಯೋಹಾನನು 1:5
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ