ದೇವರು ಎಲ್ಲಾ ಜನರಿಗೆ ಪರಲೋಕದಲ್ಲಿ ಮಾಡಿದ ಪಾಪಕ್ಕಾಗಿ ಪಶ್ಚಾತ್ತಾಪ ಪಡಲು ಮತ್ತು ಶರೀರದಲ್ಲಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರನ್ನು ನಂಬಲು ಸಮಯವನ್ನು ನೀಡಿದ್ದಾರೆ. ಅದರ ನಂತರ, ಪ್ರತಿಯೊಬ್ಬ ವ್ಯಕ್ತಿಯ ಕೃತ್ಯಗಳ ಪ್ರಕಾರ, ದೇವರು ಪರಲೋಕಕ್ಕೆ ಹೋಗುವವರನ್ನು ಮತ್ತು ನ್ಯಾಯತೀರಿಸಲ್ಪಡುವವರನ್ನು ಪ್ರತ್ಯೇಕಿಸುತ್ತಾರೆ.
ನ್ಯಾಯತೀರಿಸಲ್ಪಡುವವರಲ್ಲಿ ತಪ್ಪು ನಿರ್ಧಾರದಿಂದ ಯೇಸುವನ್ನು ಮಾರಿದ ಇಸ್ಕರಿಯೋತ ಯೂದನು ಮತ್ತು ತನ್ನ ದುಷ್ಟ ಸಲಹೆಯಿಂದ ದೇವರ ಜನರನ್ನು ವಿಗ್ರಹಾರಾಧನೆಗೆ ಒಳಪಡಿಸಿದ ಬಿಳಾಮನಂತಹ ಸುಳ್ಳು ಪ್ರವಾದಿಗಳು ಮತ್ತು ನಾಬೋತನ ದ್ರಾಕ್ಷೇತೋಟವನ್ನು ತೆಗೆದುಕೊಂಡ ಈಜೆಬೆಲ್ ಮತ್ತು ಅಹಾಬನಂತೆ ದೇವರ ಸತ್ಯವನ್ನು ನಾಶಪಡಿಸಿ ಭಾನುವಾರದ ಆರಾಧನೆ ಮತ್ತು ಕ್ರಿಸ್ಮಸ್ ನಂತಹ ನಿಯಮಗಳ ಮೂಲಕ ಸೂರ್ಯ ದೇವರನ್ನು ಆರಾಧಿಸಿದ ಜನರಿದ್ದಾರೆ.
ಪೆಗೋರದ ಬಾಳನ ಸಂಗತಿಯಲ್ಲಿ ಬಿಳಾಮನ ಆಲೋಚನೆಯನ್ನು ಅನುಸರಿಸಿ ಇಸ್ರಾಯೇಲ್ಯರನ್ನು ಯೆಹೋವನಿಗೆ ದ್ರೋಹಿಗಳನ್ನಾಗಿ ಮಾಡಿ ಸಮೂಹದವರಲ್ಲಿ ಘೋರವ್ಯಾಧಿಯುಂಟಾಗುವಂತೆ ಮಾಡಿದವರು ಇವರೇ ಅಲ್ಲವೇ.
ಅರಣ್ಯಕಾಂಡ 31:16
ಆದರೂ ಕೆಲವು ವಿಷಯಗಳಲ್ಲಿ ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ; ವಿಗ್ರಹಕ್ಕೆ ನೈವೇದ್ಯಮಾಡಿದ ಪದಾರ್ಥಗಳನ್ನು ತಿನ್ನುವದರಲ್ಲಿಯೂ ಜಾರತ್ವ ಮಾಡುವದರಲ್ಲಿಯೂ ಇಸ್ರಾಯೇಲ್ಯರು ಮುಗ್ಗರಿಸಿ ಬೀಳಬೇಕೆಂದು ಬಿಳಾಮನು ಬಾಲಾಕನಿಗೆ ಹೇಳಿದ ದುರ್ಬೋಧನೆಯನ್ನು ಅವಲಂಬಿಸಿರುವವರು ನಿನ್ನಲ್ಲಿದ್ದಾರೆ.
ಪ್ರಕಟನೆ 2:14
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ