ಏಕೆಂದರೆ ಈ ಕಾಲದಲ್ಲಿ ಹಲವಾರು ಸುಳ್ಳು ಕ್ರಿಸ್ತರು
ಮತ್ತು ಸುಳ್ಳು ಬೋಧನೆಗಳು ತುಂಬಿಕೊಂಡಿದೆ.
ದೇವರ ವಾಕ್ಯದಿಂದ ಮಾತ್ರ ನಾವು ಸತ್ಯ ಮತ್ತು ಸುಳ್ಳಿನ ವ್ಯತ್ಯಾಸ ತಿಳಿಯಬಹುದು.
“ಶಾಸ್ತ್ರಗಳಿಂದ ನಿತ್ಯಜೀವವು ದೊರೆಯುತ್ತದೆಂದು
ನೀವು ನೆನಸಿ ಅವುಗಳನ್ನು ವಿಚಾರಿಸುತ್ತೀರಲ್ಲಾ;
ಅವುಗಳೂ ನನ್ನ ವಿಷಯದಲ್ಲಿ ಸಾಕ್ಷಿಕೊಡುವವುಗಳಾಗಿವೆ.” ಯೋಹಾನ 5:39
ದೇವರಾದ ಯೇಸುವನ್ನು ಸರಿಯಾಗಿ ತಿಳಿದುಕೊಂಡು
ಪರಲೋಕರಾಜ್ಯದ ಬೀಗದ ಕೈಗಳನ್ನು ಸ್ವೀಕರಿಸಿದ ಪೇತ್ರನಂತೆ,
ನಾವು ಪವಿತ್ರಾತ್ಮನ ಕಾಲದಲ್ಲಿ ಬಂದ
ತಂದೆ ದೇವರು ಮತ್ತು ತಾಯಿ ದೇವರನ್ನು ಸರಿಯಾಗಿ
ತಿಳಿದುಕೊಂಡಾಗ, ನಾವು ಪರಲೋಕದ ದೊಡ್ಡ ಆಶೀರ್ವಾದಗಳನ್ನು ಸ್ವೀಕರಿಸಬಹುದು.
ಭೂಮಿಯ ಮೇಲಿರುವದು ಪರಲೋಕದಲ್ಲಿರುವದರ
ನೆರಳು ಮತ್ತು ಛಾಯೆಯಾಗಿದೆ ಎಂದು ಬರೆಯಲಾಗಿದೆ.
ವಿಶೇಷವಾಗಿ ಭೂಲೋಕ ಕುಟುಂಬದ ಕ್ರಮದ ಮೂಲಕ,
ದೇವರು ನಮಗೆ ಪರಲೋಕ ಕುಟುಂಬದ ಕ್ರಮದ ಬಗ್ಗೆ
ಗ್ರಹಿಕೆ ಕೊಡುತ್ತಿದ್ದಾರೆ ಹಾಗೂ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ
ಮೂಲಕ ಕೊಡಲಾದ ದೇವರ ಮಾಂಸ ಮತ್ತು ರಕ್ತದ ಮೂಲಕ ಮಾತ್ರ
ನಾವು ದೇವರ ನಿಜವಾದ ಮಕ್ಕಳಾಗಲು ಸಾಧ್ಯ ಎಂದು ತಿಳಿಸಿದ್ದಾರೆ.
(ತಂದೆ, ತಾಯಿ ಮತ್ತು ಮಕ್ಕಳನ್ನು ಒಳಗೊಂಡಿರುವ ಪರಲೋಕ ಕುಟುಂಬದ ಕ್ರಮ)
ನಿಜವಾದ ತಾಯಿ ಯಾರೆಂದು ತಿಳಿಯಲು ದೇವರು
ಸೊಲೊಮೋನನಿಗೆ ಬುದ್ಧಿವಂತಿಕೆಯನ್ನು ನೀಡಿದಂತೆ,
ಇತ್ತೀಚಿನ ದಿನಗಳಲ್ಲಿ ಚರ್ಚ್ ಆಫ್ ಗಾಡ್ನ ಸಂತರಿಗೆ
ಸತ್ಯವೇದದ ವಾಕ್ಯಗಳ ಮೂಲಕ ಜ್ಞಾನವನ್ನು ನೀಡಲಾಗುತ್ತದೆ
ಮತ್ತು ತಾಯಿ ದೇವರ ಬಳಿಗೆ ಬರುವ ಆಶೀರ್ವಾದವನ್ನು ಸ್ವೀಕರಿಸುತ್ತಿದ್ದಾರೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ