ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ಬಿಡುಗಡೆಯಾದಾಗ, ಅವರು ವಾಗ್ದಾನದ ನಾಡಾದ ಕಾನಾನ್’ಅನ್ನು ಪ್ರವೇಶಿಸಿದಾಗ, ವಿಗ್ರಹಗಳನ್ನು ಪೂಜಿಸುತ್ತಿದ್ದ ಅರಸ ಯೋಷೀಯ ಮತ್ತು ಅರಸ ಹಿಜ್ಕೀಯನು ದೇವರ ಬಳಿಗೆ ಹಿಂತಿರುಗಿದಾಗ ಮತ್ತು ಇಸ್ರಾಯೇಲ್ಯರು ಸೆರೆಯಿಂದ ಬಿಡುಗಡೆಯಾದಾಗಲೂ, ಪಸ್ಕವು ಕೇಂದ್ರಬಿಂದುವಾಗಿತ್ತು.
ಆ ಸಮಯದಂತೆಯೇ, ಇಂದು ಪಸ್ಕದ ಮೂಲಕ ದೇವರ ಆತ್ಮರಕ್ಷಣೆಯ ಕಾರ್ಯವು ತೆರೆದುಕೊಳ್ಳುತ್ತಿದೆ.
ಎರಡು ಸಾವಿರ ವರ್ಷಗಳ ಹಿಂದೆ, ಯೇಸು ತನ್ನ ಶಿಷ್ಯರೊಂದಿಗೆ ಆಚರಿಸಲು ಕುತೂಹಲದಿಂದ ಅಪೇಕ್ಷಿಸಿದ ಹೊಸ ಒಡಂಬಡಿಕೆಯ ಪಸ್ಕವನ್ನು ಕ್ರಿ.ಶ 325ರಲ್ಲಿ ಧರ್ಮ ಮತ್ತು ರಾಜಕೀಯದ ನಡುವಿನ ಪಿತೂರಿಯಿಂದಾಗಿ ನಿರ್ಮೂಲ ಮಾಡಲಾಯಿತು ಮತ್ತು ಕತ್ತಲೆಯಲ್ಲಿ ಕಣ್ಮರೆಯಾಯಿತು; ಎಷ್ಟಾದರೂ, ಪ್ರವಾದಿಸಿದಂತೆ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಬಂದು ಪಸ್ಕದ ಮೂಲಕ ಆತ್ಮರಕ್ಷಣೆಯ ಕಾರ್ಯವನ್ನು ಪ್ರಾರಂಭಿಸಿದರು.
ಆಗ ಆತನು ಅವರಿಗೆ - ನಾನು ಶ್ರಮೆ ಅನುಭವಿಸುವದಕ್ಕಿಂತ ಮುಂಚೆ ನಿಮ್ಮ ಸಂಗಡ ಈ ಪಸ್ಕದ ಊಟವನ್ನು ಮಾಡುವದಕ್ಕೆ ಕುತೂಹಲದಿಂದ ಅಪೇಕ್ಷಿಸಿದ್ದೇನೆ.
ಲೂಕನು 22:15
ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿವಸದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು - ಪಸ್ಕದ ಊಟಮಾಡುವದಕ್ಕೆ ನಾವು ನಿನಗೆ ಎಲ್ಲಿ ಸಿದ್ಧಮಾಡಬೇಕೆನ್ನುತ್ತೀ ಎಂದು ಕೇಳಲು
ಆತನು - ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ ಅವನಿಗೆ - ನನ್ನ ಕಾಲ ಸಮೀಪವಾಯಿತು, ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬಮಾಡುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಹೇಳಿರಿ ಅಂದನು.
ಮತ್ತಾಯನು 26:17-18
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ