ನಾವು ಬೆಳಕನ್ನು ನೋಡಿದಾಗ, ನಮ್ಮ ಹಿಂದೆ ನೆರಳು ಕಾಣುತ್ತದೆ, ಆದರೆ ನಾವು ಬೆಳಕಿಗೆ ಬೆನ್ನು ತಿರುಗಿಸಿದಾಗ, ನೆರಳು ನಮ್ಮ ದಾರಿಯನ್ನು ತಡೆಯುತ್ತದೆ.
ಅದೇ ರೀತಿ, ಮಾನವಕುಲವು ಬೆಳಕಾಗಿರುವ ದೇವರ ಕಡೆಗೆ ಹೋದಾಗ, ಕತ್ತಲೆ ಅವರನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ.
ತಂದೆಯ ಕಾಲದಲ್ಲಿ ಯೆರೆಮೀಯನು ಮತ್ತು ಮಗನ ಕಾಲದಲ್ಲಿ ಅಪೊಸ್ತಲರು ಮಾಡಿದಂತೆ, ನಾವು ದೇವರ ಮಹಿಮೆಯ ಬೆಳಕನ್ನು ಬೆಳಗಿಸುವಾಗ ನಾವು ಹಿಂಸೆಯನ್ನು ಅನುಭವಿಸಬಹುದು ಮತ್ತು ಅಡೆತಡೆಗಳನ್ನು ಎದುರಿಸಬಹುದು.
ಆದರೆ, ಕೊನೆಯಲ್ಲಿ, ನಾವು ಅನೇಕ ಆಶೀರ್ವಾದಗಳನ್ನು ಸ್ವೀಕರಿಸುತ್ತೇವೆ.
ಯೆಶಾಯ, ಯೆರೆಮೀಯ ಮತ್ತು ಯೆಹೆಜ್ಕೇಲ ತಂದೆಯ ಕಾಲದಲ್ಲಿ ಯೆಹೋವ ದೇವರ ಬೆಳಕನ್ನು ಪ್ರಕಾಶಿಸಿದರು ಮತ್ತು ಅಪೊಸ್ತಲ ಪೌಲ, ಪೇತ್ರ ಮತ್ತು ಯೋಹಾನನು ಮಗನ ಕಾಲದಲ್ಲಿ ಯೇಸುವಿನ ಮಹಿಮೆಯ ಬೆಳಕನ್ನು ಪ್ರಕಾಶಿಸಿದರು.
ಅದೇ ರೀತಿ, ಪವಿತ್ರಾತ್ಮನ ಕಾಲದಲ್ಲಿ, ಪ್ರಪಂಚದಾದ್ಯಂತದ 175 ದೇಶಗಳಲ್ಲಿ ದೇವರ ಸಭೆಯ ಸದಸ್ಯರು
ರಕ್ಷಕರಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ಪರಲೋಕದ ತಾಯಿ ಯೆರೂಸಲೇಮ್ ರವರ ಮಹಿಮೆಯನ್ನು ಪ್ರಕಾಶಿಸುತ್ತಿದ್ದಾರೆ.
ಏಳು, ಪ್ರಕಾಶಿಸು, ನಿನಗೆ ಬೆಳಕು ಬಂತು, ಯೆಹೋವನ ತೇಜಸ್ಸು ನಿನ್ನ ಮೇಲೆ ಉದಯಿಸಿದೆ.
ಇಗೋ, ಕತ್ತಲು ಭೂವಿುಯನ್ನು ಆವರಿಸಿದೆ, ಕಾರ್ಗತ್ತಲು ಜನಾಂಗಗಳನ್ನು ಮುಚ್ಚಿದೆ; ನಿನ್ನ ಮೇಲಾದರೋ ಯೆಹೋವನು ಉದಯಿಸುವನು, ಆತನ ತೇಜಸ್ಸು ನಿನ್ನಲ್ಲಿ ಕಾಣಿಸುವದು.
ಜನಾಂಗಗಳು ನಿನ್ನ ಬೆಳಕಿಗೆ ನೆರೆಯುವವು, ಅರಸರು ನಿನ್ನಲ್ಲಿನ ಉದಯಪ್ರಕಾಶಕ್ಕೆ ಬರುವರು.
ಯೆಶಾಯ 60:1-3
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ