ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ ಆಶೀರ್ವದಿಸಿದ ಮೆಲ್ಕಿಜೆದೇಕನಿಗೆ
ಅಬ್ರಹಾಮನು ದಶಮಾಂಶವನ್ನು ಕೊಟ್ಟನು ಮತ್ತು ದಾವೀದನು
“ಮೆಲ್ಕಿಜೆದೇಕನ ಕ್ರಮವನ್ನು ಅನುಸರಿಸುವ ನಿರಂತರವಾದ ಯಾಜಕನು ದೇವರಾಗಿದ್ದಾರೆ”
ಎಂದು ಪ್ರವಾದಿಸಿದನು. ಅಲ್ಲದೆ, ಅಪೊಸ್ತಲ ಪೌಲನು “ಮೆಲ್ಕಿಜೆದೇಕನಿಗೆ ತಂದೆಯೂ
ತಾಯಿಯೂ ವಂಶಾವಳಿಯೂ ಇಲ್ಲ” ಎಂದು ವಿವರಿಸುವ ಮೂಲಕ
ಮಾನವಕುಲದ ರಕ್ಷಣೆಗಾಗಿ ಪವಿತ್ರಾತ್ಮನ ಕಾಲದಲ್ಲಿ ಮತ್ತೆ ಬರುವ ಕ್ರಿಸ್ತನ ಬಗ್ಗೆ ಸಾಕ್ಷಿಯನ್ನು ನೀಡಿದನು.
ಹಳೆ ಒಡಂಬಡಿಕೆಯ ಮೆಲ್ಕಿಜೆದೇಕನು ಅಬ್ರಹಾಮನಿಗೆ ರೊಟ್ಟಿ ಮತ್ತು ದ್ರಾಕ್ಷಾರಸದ
ಮೂಲಕ ದೈಹಿಕ ಆಶೀರ್ವಾದವನ್ನು ನೀಡಿದನು. ಅದೇ ರೀತಿಯಲ್ಲಿ,
ಯೇಸು ಹೊಸ ಒಡಂಬಡಿಕೆಯ ಪಸ್ಕದ ರೊಟ್ಟಿ ಮತ್ತು ದ್ರಾಕ್ಷಾರಸದ ಮೂಲಕ
ಪಾಪಕ್ಷಮೆ ಮತ್ತು ನಿತ್ಯಜೀವದ ಆಶೀರ್ವಾದವನ್ನು ನೀಡಿದರು.
1,600 ವರ್ಷಗಳ ಕಾಲ ನಾಶವಾಗಿದ್ದ ಹೊಸ ಒಡಂಬಡಿಕೆಯ ಪಸ್ಕವನ್ನು
ಪುನಃಸ್ಥಾಪಿಸುವ ಮೂಲಕ ಕ್ರಿಸ್ತ ಅನ್ ಸಂಗ್ ಹೊಂಗ್ ತಾವು
ಮೆಲ್ಕಿಜೆದೇಕನ ಕ್ರಮದಲ್ಲಿ ಬಂದ ದೇವರು ಎಂದು ಸಾಕ್ಷಿ ನೀಡಿದರು.
ಅವನು ಕೆದೊರ್ಲಗೋಮರನನ್ನೂ ಅವನೊಂದಿಗೆ ಇದ್ದ ರಾಜರನ್ನೂ ಹೊಡೆದು ಬಂದಮೇಲೆ . . . ಸಾಲೇವಿುನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಅವನಿಗೆ ಕೊಟ್ಟನು.
ಆದಿಕಾಂಡ 14:17-20
ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆ ಮಾಡಿ ಪಸ್ಕಕ್ಕೆ ಸೌರಿಸಿದರು . . . ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ . . . ಆಮೇಲೆ ಪಾತ್ರೆಯನ್ನು ತೆಗೆದುಕೊಂಡು ಸ್ತೋತ್ರಮಾಡಿ . . . ಇದು ನನ್ನ ರಕ್ತ, ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.
ಮತ್ತಾಯ 26:19-28
ಇದಲ್ಲದೆ ಸೇನಾಧೀಶ್ವರನಾದ ಯೆಹೋವನು ಈ ಪರ್ವತದಲ್ಲಿ . . . ಮಡ್ಡಿಗಟ್ಟಿದ ಮೇಲೆ ಶೋಧಿಸಿದ ದ್ರಾಕ್ಷಾರಸದಿಂದಲೂ ಕೂಡಿದ ಔತಣವನ್ನು ಅಣಿಮಾಡುವನು . . . ಮರಣವನ್ನು ಶಾಶ್ವತವಾಗಿ ನಿರ್ನಾಮ ಮಾಡುವನು . . .
ಆ ದಿನದಲ್ಲಿ ಜನರು - ಆಹಾ, ಈತನೇ ನಮ್ಮ ದೇವರು, ನಮ್ಮನ್ನು ರಕ್ಷಿಸಲಿ ಎಂದು ಈತನನ್ನು ನಿರೀಕ್ಷಿಸಿಕೊಂಡಿದ್ದೇವೆ. . . ಎಂದು ಹೇಳಿಕೊಳ್ಳುವರು.
ಯೆಶಾಯ 25:6-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ