ಇಸ್ರಾಯೇಲ್ಯರು ಐಗುಪ್ತವನ್ನು ತೊರೆದಾಗ, ದೇವರು ಮೊದಲು ಪಸ್ಕದ ಶಕ್ತಿಯನ್ನು ಬಹಿರಂಗಪಡಿಸಿದರು ಮತ್ತು ಮೋಶೆಯ ನಿಯಮದ ಮೂಲಕ ಪಸ್ಕವನ್ನು ಘೋಷಿಸಿದರು, ತಲತಲಾಂತರಗಳವರೆಗೂ ನಿಗದಿತ ಸಮಯದಲ್ಲಿ ಅದನ್ನು ಆಚರಿಸಲು ಅವರಿಗೆ ಆಜ್ಞಾಪಿಸಿದರು.
ನಂತರ, ಪಸ್ಕವನ್ನು ಆಚರಿಸಿದ ನಂತರ ದೇವಜನರು ಪ್ರಶಂಸಿಸಲ್ಪಟ್ಟರು ಮತ್ತು ವಿಪತ್ತುಗಳಿಂದ ರಕ್ಷಿಸಲ್ಪಟ್ಟರು ಮತ್ತು ಯೇಸು ಕೂಡ ತನ್ನ ಶಿಷ್ಯರಿಗೆ ನಿತ್ಯಜೀವದ ಆಶೀರ್ವಾದವನ್ನು ದಯಪಾಲಿಸುತ್ತಾ, ಅವರೊಂದಿಗೆ ಪಸ್ಕವನ್ನು ಆಚರಿಸಿದರು.
ಕ್ರಿ.ಶ 325 ರಲ್ಲಿ ಪಸ್ಕವನ್ನು ನಿರ್ಮೂಲಗೊಳಿಸಿದ್ದರಿಂದ, ಎಲ್ಲಾ ಸಭೆಗಳು ಅನ್ಯಧರ್ಮದ ದೇವರ ಪದ್ಧತಿಗಳನ್ನು ಅನುಸರಿಸುತ್ತಿವೆ.
ಎಷ್ಟಾದರೂ, ಚರ್ಚ್ ಆಫ್ ಗಾಡ್ನ ಸದಸ್ಯರು, ದೇವರು ತನ್ನ ಜನರು ತಲತಲಾಂತರಗಳವರೆಗೂ ಆಚರಿಸಲು ಆಜ್ಞಾಪಿಸಿದ ಪಸ್ಕದ ಮಹತ್ವವನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬೋಧನೆಗಳ ಮೂಲಕ ಅರಿತುಕೊಂಡು ಅದನ್ನು ಆಚರಿಸುತ್ತಾರೆ.
ಅನಂತರ ಅರಸನು ಎಲ್ಲಾ ಜನರಿಗೆ - ಈ ನಿಬಂಧನಗ್ರಂಥದಲ್ಲಿ ಬರೆದಿರುವ ಪ್ರಕಾರ ನೀವು ನಿಮ್ಮ ದೇವರಾದ ಯೆಹೋವನಿಗೋಸ್ಕರ ಪಸ್ಕಹಬ್ಬವನ್ನು ಆಚರಿಸಬೇಕು ಎಂದು ಆಜ್ಞಾಪಿಸಿದನು. . . .
ಯೆಹೋವನ ಕಡೆಗೆ ತಿರುಗಿಕೊಂಡು ಪೂರ್ಣಮನಸ್ಸಿನಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಬಲದಿಂದಲೂ ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಿದ ಯೋಷೀಯನಿಗೆ ಸಮಾನನಾದ ಅರಸನು ಮುಂಚೆಯೂ ತರುವಾಯವೂ ಇರಲಿಲ್ಲ.
2 ಅರಸುಗಳು 23:21–25
ಆತನು - ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ ಅವನಿಗೆ - ನನ್ನ ಕಾಲ ಸಮೀಪವಾಯಿತು, ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬಮಾಡುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಹೇಳಿರಿ ಅಂದನು.
ಶಿಷ್ಯರು ಯೇಸು ತಮಗೆ ಅಪ್ಪಣೆಕೊಟ್ಟಂತೆ ಮಾಡಿ ಪಸ್ಕಕ್ಕೆ ಸೌರಿಸಿದರು.
ಮತ್ತಾಯನು 26:18-19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ