ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದಿಂದ ತಿನ್ನುವ ಮೂಲಕ ಆದಾಮ ಹಾಗೂ ಹವ್ವ ಸತ್ತಾಗ, ಶಿಲುಬೆಯ ಬಲಗಡೆಯಲ್ಲಿರುವ ಕಳ್ಳನನ್ನು ರಕ್ಷಣೆ ಹೊಂದಿದಾಗ, ಇಬ್ಬರು ಕುರುಡರು ವಾಸಿಯಾದಾಗ, ಹನ್ನೆರಡು ವರ್ಷಗಳ ಕಾಲ ರಕ್ತ ಕುಸುಮ ರೋಗದಿಂದ ಬಳಲುತ್ತಿದ್ದ ಸ್ತ್ರೀ ವಾಸಿಯಾದಾಗ, ಮತ್ತು ಪಸ್ಕಹಬ್ಬದ ರೊಟ್ಟಿ ಮತ್ತು ದ್ರಾಕ್ಷಾರಸದಲ್ಲಿ ಭಾಗಿಯಾಗಿ ಯೇಸುವಿನ ಮಾಂಸವನ್ನು ತಿಂದು ಆತನ ರಕ್ತವನ್ನು ಕುಡಿಯುವವನು ನಿತ್ಯಜೀವವನ್ನು ಹೊಂದುವನು ಎಂಬ ನಿಜಸಂಗತಿಯು ನಾವು ದೇವರ ವಾಕ್ಯದ ಶಕ್ತಿಯನ್ನು ನೋಡಬಹುದು.
ಮಗನ ಕಾಲದಲ್ಲಿ, ಪರ್ಣಶಾಲೆಗಳ ಹಬ್ಬದ ಮಹಾದಿವಸವಾದ ಕಡೇ ದಿನದಂದು ತನ್ನ ಬಳಿಗೆ ಬಂದವರಿಗೆ ಯೇಸು ಮಾತ್ರ ಜೀವಜಲವನ್ನು ಕೊಟ್ಟರು. ಪವಿತ್ರಾತ್ಮನ ಕಾಲದಲ್ಲಿ, ಆತ್ಮನು ಮತ್ತು ಮದಲಗಿತ್ತಯಾಗಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರ ಬಳಿಗೆ ಬರುವವರು, ಜೀವಜಲವನ್ನು ಅಂದರೆ ಪವಿತ್ರಾತ್ಮವನ್ನು ಸ್ವೀಕರಿಸುತ್ತಾರೆ. ಅವರು ದೇವರ ವಾಕ್ಯದ ಬಲದಿಂದ ಎಲ್ಲವನ್ನೂ ಸಾಧಿಸಬಲ್ಲರು.
ಆ ಜಾತ್ರೆಯ ಮಹಾದಿವಸವಾದ ಕಡೇ ದಿನದಲ್ಲಿ ಯೇಸು ನಿಂತುಕೊಂಡು - ಯಾವನಿಗಾದರೂ ನೀರಡಿಕೆಯಾಗಿದ್ದರೆ ಅವನು ನನ್ನ ಬಳಿಗೆ ಬಂದು ಕುಡಿಯಲಿ. ನನ್ನನ್ನು ನಂಬಿದವನ ಹೊಟ್ಟೆಯೊಳಗಿಂದ ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಜೀವಕರವಾದ ನೀರಿನ ಹೊಳೆಗಳು ಹರಿಯುವವು ಎಂದು ಕೂಗಿ ಹೇಳಿದನು. ಇದನ್ನು ಯೇಸು ತನ್ನನ್ನು ನಂಬಿದವರು ಹೊಂದಲಿರುವ ಪವಿತ್ರಾತ್ಮವರವನ್ನು ಕುರಿತು ಹೇಳಿದನು; ಆತನು ಇನ್ನೂ ತನ್ನ ಮಹಿಮೆಯ ಪದವಿಯನ್ನು ಹೊಂದದೆ ಇದ್ದಕಾರಣ ಪವಿತ್ರಾತ್ಮವರವು ಇನ್ನೂ ಬಂದಿದ್ದಿಲ್ಲ.
ಯೋಹಾನ 7:37-39
ಆತ್ಮನೂ ಮದಲಗಿತ್ತಿಯೂ - ಬಾ ಅನ್ನುತ್ತಾರೆ. ಕೇಳುವವನು - ಬಾ ಅನ್ನಲಿ. ಬಾಯಾರಿದವನು ಬರಲಿ. ಇಷ್ಟವುಳ್ಳವನು ಜೀವಜಲವನ್ನು ಕ್ರಯವಿಲ್ಲದೆ ತೆಗೆದುಕೊಳ್ಳಲಿ.
ಪ್ರಕಟನೆ 22:17
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ