ಮೋಶೆ ಎರಡನೇ ಬಾರಿ ಹತ್ತು ಆಜ್ಞೆಗಳನ್ನು ಸ್ವೀಕರಿಸಿ ಬಂದ ದಿನವನ್ನು ಸರ್ವದೋಷಪರಿಹಾರಕ ದಿನ ಎಂದು ದೇವರು ನೇಮಿಸಿದರು ಮತ್ತು ಪರ್ಣಶಾಲೆಗಳ ಹಬ್ಬವು ಇಸ್ರಾಯೇಲ್ಯರು ಹತ್ತು ಆಜ್ಞೆಗಳ ಕಲ್ಲಿನ ಹಲಗೆಗಳನ್ನು ಇರಿಸಲು ಗುಡಾರವನ್ನು ನಿರ್ಮಿಸಿದ ಹಬ್ಬವಾಗಿದೆ.
3,500 ವರ್ಷಗಳ ಹಿಂದೆ ನೋಡಿದಂತೆ, ದೇವರ ಆಲಯವನ್ನು ನಿರ್ಮಿಸುವ ಪ್ರಮುಖ ಅಂಶವೆಂದರೆ ಪಾಲ್ಗೊಳ್ಳಲು ಮತ್ತು ಭಾಗವಹಿಸಲು ಸಿದ್ಧಚಿತ್ತವಿರುವ ಹೃದಯವನ್ನು ಹೊಂದಿರುವುದಾಗಿದೆ.
ಅಂತಹ ಜನರು ಆಲಯದ ನಿರ್ಮಾಣಕ್ಕೆ ಹೇರಳವಾಗಿ ಸಾಮಗ್ರಿಗಳನ್ನು ಅರ್ಪಿಸಿದರು.
ಇಂದು, ಇಡೀ ಲೋಕವು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ಪರಲೋಕ ತಾಯಿ ಯೆರೂಸಲೇಮಿನ ಬಳಿಗೆ ಗುಂಪು ಕೂಡಿ ಬರುತ್ತಿದ್ದಾರೆ ಏಕೆಂದರೆ ದೇವಜನರು ಯೆರೂಸಲೇಮ್ ಆಲಯವನ್ನು ನಿರ್ಮಿಸುವ ವಿವಿಧ ಸಾಮಗ್ರಿಗಳನ್ನು ಸೂಚಿಸುತ್ತಾರೆ.
ಹಳೆ ಒಡಂಬಡಿಕೆಯಲ್ಲಿ ಪರ್ಣಶಾಲೆಗಳ ಹಬ್ಬಕ್ಕೆ ವಿವಿಧ ಕೊಂಬೆಗಳನ್ನು ಒಟ್ಟುಗೂಡಿಸಿದಂತೆ, ದೇವಜನರು ಯೆರೂಸಲೇಮಿಗೆ ವಿವಿಧ ರೀತಿಯ ಮರಗಳಾಗಿ ಒಟ್ಟುಗೂಡುತ್ತಾರೆ ಎಂಬ ಪ್ರವಾದನೆಯಿದೆ.
ಯಾರಾರನ್ನು ಹೃದಯವು ಪ್ರೇರಿಸಿತೋ ಯಾರಾರ ಮನಸ್ಸು ಸಿದ್ಧವಾಗಿತ್ತೋ ಅವರೆಲ್ಲರೂ ಬಂದು ದೇವದರ್ಶನದ ಗುಡಾರದ ಕೆಲಸಕ್ಕೋಸ್ಕರವೂ ಅದರ ಸಮಸ್ತ ಸೇವೆಗೋಸ್ಕರವೂ ದೀಕ್ಷಾವಸ್ತ್ರಗಳಿಗೋಸ್ಕರವೂ ಯೆಹೋವನಿಗೆ ಕಾಣಿಕೆಗಳನ್ನು ತಂದರು.
ಸಿದ್ಧಚಿತ್ತರಾದ ಗಂಡಸರೂ ಹೆಂಗಸರೂ ಬಂದು . . .
ವಿಮೋಚನಕಾಂಡ 35:21-22
ಅಪೊಸ್ತಲರೂ ಪ್ರವಾದಿಗಳೂ ಎಂಬ ಅಸ್ತಿವಾರದ ಮೇಲೆ ನೀವು ಮಂದಿರದೋಪಾದಿಯಲ್ಲಿ ಕಟ್ಟಲ್ಪಟ್ಟಿದ್ದೀರಿ.
ಯೇಸು ಕ್ರಿಸ್ತನೇ ಮುಖ್ಯವಾದ ಮೂಲೆಗಲ್ಲು; ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ.
ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.
ಎಫೆಸದವರಿಗೆ 2:20-22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ