ಸೈತಾನನಿಂದ ಶೋಧನೆಗೆ ಒಳಗಾಗಿ ಪರಲೋಕದಲ್ಲಿ ಪಾಪಮಾಡಿದ್ದರಿಂದ ಪರಲೋಕದ ದೇವದೂತರು ಈ ಭೂಮಿಗೆ ದೊಬ್ಬಲ್ಪಟ್ಟರು ಎಂದು ಸತ್ಯವೇದ ಸಾಕ್ಷಿಕರಿಸುತ್ತದೆ - ಇದು ಮನುಕುಲದ ಕಥೆ.
ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರು ಈ ಭೂಮಿಗೆ ಬಂದರು ಮತ್ತು ಮನುಕುಲಕ್ಕೆ ಪಾಪಗಳ ಕ್ಷಮೆಯನ್ನು ನೀಡಲು ಹೊಸ ಒಡಂಬಡಿಕೆಯ ಪಸ್ಕಹಬ್ಬವನ್ನು ಸ್ಥಾಪಿಸಿದರು, ಹಾಗಾಗಿ ಅವರು ತಮ್ಮ ಆಧ್ಯಾತ್ಮಿಕ ಮನೆಯಾದ, ನಿತ್ಯಪರಲೋಕ ರಾಜ್ಯಕ್ಕೆ ಹಿಂತಿರುಗಬಹುದು.
ಭೂಲೋಕ ಕುಟುಂಬವು ರಕ್ತದಿಂದ ಸಂಬಂಧ ಹೊಂದಿರುವಂತೆ, ಪರಲೋಕದ ಕುಟುಂಬವು ರಕ್ತದಿಂದ ಕೂಡಿದೆ.
ತಂದೆ ದೇವರ ಮತ್ತು ತಾಯಿ ದೇವರ ಮಕ್ಕಳಂತೆ ಪರಲೋಕ ಕುಟುಂಬದ ಸದಸ್ಯರಾಗಲು, ಮನುಕುಲವು ಪಸ್ಕದ ರೊಟ್ಟಿಯನ್ನು ತಿನ್ನಬೇಕು ಮತ್ತು ದೇವರ ಮಾಂಸ ಮತ್ತು ರಕ್ತದಲ್ಲಿ ಪಾಲುಗಾರರಾಗಲು ಪಸ್ಕದ ದ್ರಾಕ್ಷಾರಸವನ್ನು ಕುಡಿಯಬೇಕು.
ಇಂದು, 175 ದೇಶಗಳಲ್ಲಿ ಚರ್ಚ್ ಆಫ್ ಗಾಡ್ ಸದಸ್ಯರು ಒಂದೇ ಮನಸ್ಸಿನಿಂದ ಪಸ್ಕಹಬ್ಬವನ್ನು ಆಚರಿಸುತ್ತಾರೆ.
ಅವರು ಪರಲೋಕದಲ್ಲಿರುವ ದೇವಾಲಯದ ಪ್ರತಿರೂಪವೂ ಛಾಯೆಯೂ ಆಗಿರುವ ಆಲಯದಲ್ಲಿ ಯಾಜಕತ್ವವನ್ನು ನಡಿಸುವವರು.
ಇಬ್ರಿಯರಿಗೆ 8:5
ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ದಿವಸಗಳಲ್ಲಿ ಪಸ್ಕದ ಕುರಿಮರಿಯನ್ನು ಕೊಯ್ಯತಕ್ಕ ದಿವಸ ಬಂದಾಗ . . .
ಬಳಿಕ ಆತನು ರೊಟ್ಟಿಯನ್ನು ತೆಗೆದುಕೊಂಡು ಸ್ತೋತ್ರಮಾಡಿ ಮುರಿದು ಅವರಿಗೆ ಕೊಟ್ಟು - ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ . . .
ಊಟವಾದ ಮೇಲೆ ಆತನು ಅದೇ ರೀತಿಯಾಗಿ ಪಾತ್ರೆಯನ್ನು ತೆಗೆದುಕೊಂಡು - ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.
ಲೂಕನು 22:7–20
ಹೀಗಿರಲಾಗಿ ನೀವು ಇನ್ನು ಮೇಲೆ ಪರದೇಶದವರೂ ಅನ್ಯರೂ ಆಗಿರದೆ ದೇವಜನರೊಂದಿಗೆ ಒಂದೇ ಸಂಸ್ಥಾನದವರೂ ದೇವರ ಮನೆಯವರೂ ಆಗಿದ್ದೀರಿ.
ಎಫೆಸದವರಿಗೆ 2:19
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ