ನಾವು ದೇವರನ್ನು ಹುಡುಕಬೇಕು ಏಕೆಂದರೆ ನಮ್ಮ ಜೀವನದಲ್ಲಿರುವ ಸಮಸ್ಯೆಗಳಿಗೆ ಉತ್ತರಗಳು ಯಾವಾಗಲೂ ದೇವರಿಂದ ಕೊಡಲ್ಪಡುತ್ತದೆ.
ದಾವೀದನು, ಯೆಹೋಷಾಫಾಟನು ಮತ್ತು ಹಿಜ್ಕೀಯನು ಆಶೀರ್ವದಿತ ಮತ್ತು ಜಯಶಾಲಿಯಾದ ಜೀವನವನ್ನು ಜೀವಿಸಲು ಕಾರಣವೇನೆಂದರೆ ಅವರು ದೇವರ ಮೇಲೆ ಅವಲಂಬಿತರಾಗಿದ್ದರಿಂದ ಹೊರತು ಮನುಷ್ಯರ ಮೇಲೆ ಅಥವಾ ದೈಹಿಕ ಲೋಕದ ವಸ್ತುಗಳ ಮೇಲೆ ಅಲ್ಲ.
ಈ ಯುಗದಲ್ಲಿ ಜೀವಿಸುತ್ತಿರುವ ನಮಗಾಗಿ ದೇವರು ಹಿಂದಿನ ಇತಿಹಾಸವನ್ನು ಸತ್ಯವೇದದಲ್ಲಿ ದಾಖಲಿಸಿದ್ದಾರೆ.
ಯೆರಿಕೊವನ್ನು ವಶಪಡಿಸಿಕೊಂಡಾಗ ಮತ್ತು ಕೆಂಪು ಸಮುದ್ರವನ್ನು ವಿಭಜಿಸಿದಾಗ ದೇವರು ಯಾವಾಗಲೂ ತನ್ನ ಜನರೊಂದಿಗೆ ಇದ್ದರು.
ಇದನ್ನು ನೆನಪಿನಲ್ಲಿಟ್ಟುಕೊಂಡು, ಚರ್ಚ್ ಆಫ್ ಗಾಡ್ ಸದಸ್ಯರು ಯಾವಾಗಲೂ ಯಾವುದೇ ಕಷ್ಟಕರ ಪರಿಸ್ಥಿತಿಯಲ್ಲಿಯೂ ದೇವರ ಮೇಲೆ ಅವಲಂಬಿತರಾಗಿದ್ದಾರೆ.
ಹಿಜ್ಕೀಯನು ಯೆಹೂದದಲ್ಲೆಲ್ಲಾ ಇದೇ ವ್ಯವಸ್ಥೆಯನ್ನು ಮಾಡಿದನು. ಅವನು ತನ್ನ ದೇವರಾದ ಯೆಹೋವನಿಗೆ ಒಳ್ಳೆಯವನೂ ನೀತಿವಂತನೂ ನಂಬಿಗಸ್ತನೂ ಆಗಿ ನಡೆದನು.
ಅವನು ತನ್ನ ದೇವರ ಒಲುಮೆಯನ್ನು ಪಡಕೊಳ್ಳುವದಕ್ಕೋಸ್ಕರ... ತಾನು ಪ್ರಾರಂಭಿಸಿದ ಎಲ್ಲಾ ಕಾರ್ಯಗಳನ್ನು ಯಥಾರ್ಥಚಿತ್ತದಿಂದ ಮಾಡಿ ಕೊನೆಗಾಣಿಸಿದನು.
2 ಪೂರ್ವಕಾಲವೃತ್ತಾಂತ 31:20-21
ಅನೇಕರು ಯೆಹೋವನಿಗೋಸ್ಕರ ಕಾಣಿಕೆಗಳನ್ನೂ ಯೆಹೂದ್ಯರ ಅರಸನಾದ ಹಿಜ್ಕೀಯನಿಗೋಸ್ಕರ ಶ್ರೇಷ್ಠ ವಸ್ತುಗಳನ್ನೂ ತೆಗೆದುಕೊಂಡು ಬಂದರು. ಅಂದಿನಿಂದ ಎಲ್ಲಾ ಜನಾಂಗಗಳವರು ಹಿಜ್ಕೀಯನನ್ನು ಬಲು ದೊಡ್ಡವನೆಂದು ಎಣಿಸುತ್ತಿದ್ದರು.
2 ಪೂರ್ವಕಾಲವೃತ್ತಾಂತ 32:23
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ