ಇಸ್ರಾಯೇಲ್ಯರು ಕೆಂಪು ಸಮುದ್ರವನ್ನು ಪ್ರವೇಶಿಸುವದನ್ನು ಯೇಸು ಸಮಾಧಿಯನ್ನು ಪ್ರವೇಶಿಸುವುದ್ದನ್ನು ಸೂಚಿಸುತ್ತದೆ ಹಾಗೂ ಇಸ್ರಾಯೇಲ್ಯರು ಸಮುದ್ರದ ಇನ್ನೊಂದು ಕಡೆಗೆ ದಡ ತಲುಪುವದು ಯೇಸುವಿನ ಪುನರುತ್ಥಾನವನ್ನು ಸೂಚಿಸುತ್ತದೆ.
ನಾವು ಈ ಕಾರ್ಯವನ್ನು ಮರೆಯಬಾರದೆಂದು ದೇವರು ಹಳೆ ಒಡಂಬಡಿಕೆಯಲ್ಲಿ ಪ್ರಥಮಫಲದ ದಿನವನ್ನು ಸ್ಥಾಪಿಸಿದರು.
ಹಳೆ ಒಡಂಬಡಿಕೆಯಲ್ಲಿ ಪಸ್ಕ ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬದ ನಂತರದ ಮೊದಲ ಭಾನುವಾರದಂದು ಪ್ರಥಮಫಲದ ದಿನವನ್ನು ಆಚರಿಸಿದಂತೆಯೇ, ನಿದ್ರೆಹೋದವರಲ್ಲಿ ಪ್ರಥಮಫಲವಾದ ಯೇಸುವಿನ ಪುನರುತ್ಥಾನವು ಸಹ ಭಾನುವಾರದಂದು ಸಂಭವಿಸಿತು.
ಇದರ ಫಲಿತಾಂಶವಾಗಿ, ಆದಿಸಭೆಯ ದೇವಜನರು ತಾವು ಸತ್ತರೂ ಮತ್ತೆ ಜೀವಿಸುವರು ಎಂಬ ನಂಬಿಕೆಯನ್ನು ಹೊಂದಿದ್ದರು ಮತ್ತು ದೇವರ ಪರವಾಗಿ ನಿಂತು ಆತ್ಮರಕ್ಷಣೆಯ ಸುದ್ದಿಯನ್ನು ಬೋಧಿಸುವದರಲ್ಲಿ ಯಾವಾಗಲೂ ಸಂತೋಷವನ್ನು ಕಂಡುಕೊಂಡರು.
ಆದರೆ ಕ್ರಿಸ್ತನು ಸತ್ತವರೊಳಗಿಂದ ಎದ್ದು ಬಂದೇ ಇದ್ದಾನೆ; ನಿದ್ರೆಹೋದವರಲ್ಲಿ ಪ್ರಥಮಫಲವಾದನು.
1 ಕೊರಿಂಥದವರಿಗೆ 15:20
ಆಗ ಇಗೋ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು;
ಭೂವಿುಯು ಅದರಿತು; ಬಂಡೆಗಳು ಸೀಳಿಹೋದವು; ಸಮಾಧಿಗಳು ತೆರೆದವು; ನಿದ್ದೆಹೋಗಿದ್ದ ಅನೇಕ ಭಕ್ತರ ದೇಹಗಳು ಎದ್ದವು.
ಮತ್ತು ಆತನು ಎದ್ದ ಮೇಲೆ ಸಮಾಧಿಗಳೊಳಗಿಂದ ಹೊರಗೆ ಬಂದು ಪರಿಶುದ್ಧ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.
ಮತ್ತಾಯನು 27:51-53
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ