2,000 ವರ್ಷಗಳ ಹಿಂದೆ, ಸೃಷ್ಟಿಕರ್ತ ದೇವರು, ಯೇಸುವಿನ ಹೆಸರಿನಲ್ಲಿ ಈ ಭೂಮಿಗೆ ಬಂದು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದರು.
ಹೊಸ ಒಡಂಬಡಿಕೆಯ ಮೂಲಕ, ಪಾಪ ಮತ್ತು ಮರಣದಿಂದ ಬಳಲುತ್ತಿರುವ ದೇವರ ಮಕ್ಕಳು, ಪಾಪಗಳ ಕ್ಷಮೆ ಮತ್ತು ನಿತ್ಯಜೀವವನ್ನು ಹೊಂದಬಹುದು.
ಮೂರು ವರ್ಷಗಳ ಕಾಲ, ಯೇಸು ತನ್ನ ಶಿಷ್ಯರಿಗೆ ಹೊಸ ಒಡಂಬಡಿಕೆಯನ್ನು ಕೈಗೊಳ್ಳುವ ಒಂದು ಮಾದರಿಯನ್ನು ತೋರಿಸಿದರು.
“ನಾನು ನಿಮಗೆ ಮಾಡಿದ ಮೇರೆಗೆ ನೀವು ಸಹ ಮಾಡುವಂತೆ ನಿಮಗೆ ಮಾದರಿಯನ್ನು ತೋರಿಸಿದ್ದೇನೆ.”ಯೋಹಾನ 13:15
ಪುನರುತ್ಥಾನದ ನಂತರ, ಯೇಸು ತನ್ನ ಶಿಷ್ಯರಿಗೆ ಎಲ್ಲಾ ಜನರಿಗೆ ಹೊಸ ಒಡಂಬಡಿಕೆಯನ್ನು ಕೈಗೊಳ್ಳುವಂತೆ ಕಲಿಸಲು ಹೇಳಿದರು, ಹಾಗಾಗಿ ಅವರು ರಕ್ಷಿಸಲ್ಪಡಬಹುದು. (ಮತ್ತಾ 28:19)
ಯೇಸುವಿನ ವಾಕ್ಯಗಳನ್ನು ಹಿಂಬಾಲಿಸುತ್ತಾ, ಆತನ ಶಿಷ್ಯರು ಹೊಸ ಒಡಂಬಡಿಕೆಯನ್ನು ಬೋಧಿಸಿದರು.
ನಾವು ಪಾಪಗಳ ಕ್ಷಮೆಯನ್ನು ಹೊಂದಬಹುದಾದ, ಹೊಸ ಒಡಂಬಡಿಕೆಯಲ್ಲಿ ಆರಾಧನೆಗೆ ಒಂದು ನಿಯಮವಿದೆ.
ಆರಾಧನೆ ಸಮಯದಲ್ಲಿ ಪುರುಷನು ತನ್ನ ತಲೆಯನ್ನು ಮುಚ್ಚಿಕೊಂಡರೆ ಅದು ದೇವರಿಗೆ ಅವಮಾನಕರವಾಗಿದೆ. ಸ್ತ್ರೀಯು ತನ್ನ ತಲೆಯನ್ನು ಮುಚ್ಚಿಕೊಳ್ಳದಿದ್ದರೆ ಅದು ಅವಳಿಗೆ ಅವಮಾನಕರವಾಗಿದೆ. (1 ಕೊರಿ 11:4)
ಹೊಸ ಒಡಂಬಡಿಕೆಯನ್ನು ಹಿಂಬಾಲಿಸುವ ಸಭೆಯಲ್ಲಿ ಸ್ತ್ರೀ ಆರಾಧನೆಯ ಸಮಯದಲ್ಲಿ ತನ್ನ ತಲೆಯನ್ನು ಮುಸುಕಿನಿಂದ ಮುಚ್ಚಿಕೊಳ್ಳುತ್ತಾಳೆ, ಮತ್ತು ಪುರುಷನು ತಲೆಯನ್ನು ಮುಚ್ಚಿಕೊಳ್ಳುವುದಿಲ್ಲ.
ಎಷ್ಟಾದರೂ, ಯೇಸುವಿನ ಸ್ವರ್ಗಾರೋಹಣದ ನಂತರ, ಕೆಲವು ಸ್ತ್ರೀಯರು ಮುಸುಕುಗಳನ್ನು ಧರಿಸಬೇಕಾಗಿಲ್ಲ ಎಂದು ಆಗ್ರಹಿಸಿದರು.
ಈ ಕಾರಣದಿಂದಾಗಿ, ಅಪೊಸ್ತಲ ಪೌಲನು ಮಾನವ ಸ್ವಭಾವದಿಂದ ಮಹಿಳೆಗೆ ಉದ್ದನೆಯ ಕೂದಲು ಸುಂದರವಾಗಿ ಕಾಣುತ್ತದೆ ಎಂದು ವಿವರಿಸುತ್ತಾ, ಮುಸುಕುಗಳನ್ನು ಧರಿಸಲು ಒತ್ತಿ ಹೇಳಿದನು.
ನಿಮ್ಮೊಳಗೆ ನೀವೇ ಯೋಚಿಸಿ ತೀರ್ಮಾನಿಸಿಕೊಳ್ಳಿರಿ. ಸ್ತ್ರೀಯು ಮುಸುಕು ಹಾಕಿಕೊಳ್ಳದೆ ದೇವರಿಗೆ ಪ್ರಾರ್ಥನೆ ಮಾಡುವದು ಯುಕ್ತವೋ?
ಪುರುಷನು ಕೂದಲು ಬೆಳಸಿಕೊಂಡರೆ ಅದು ಅವನಿಗೆ ಅವಮಾನಕರವಾಗಿದೆಯೆಂದೂ
ಸ್ತ್ರೀಯು ಬೆಳಸಿಕೊಂಡರೆ ಕೂದಲು ಅವಳಿಗೆ ಮುಸುಕಿಗೆ ಬದಲಾಗಿ ಕೊಡಲ್ಪಟ್ಟಿರುವದರಿಂದ ಅದು ಅವಳಿಗೆ ಗೌರವವಾಗಿದೆಯೆಂದೂ ನಿಮಗೆ ಸ್ವಭಾವ ಸಿದ್ಧವಾಗಿ ತಿಳಿಯುತ್ತದಲ್ಲವೋ?
ಒಬ್ಬನು ವಾಗ್ವಾದಪ್ರಿಯನಾಗಿ ಕಾಣಿಸಿಕೊಂಡರೆ ಇಂಥ ಪದ್ಧತಿ ನಮ್ಮಲಿಲ್ಲ, ಮತ್ತು ದೇವರ ಸಭೆಗಳಲ್ಲಿಯೂ ಇಲ್ಲ ಎಂದು ತಿಳುಕೊಳ್ಳಲಿ.1 ಕೊರಿಂಥದವರಿಗೆ 11:13-16
ಆರಾಧನೆಯ ಸಮಯದಲ್ಲಿ ಸ್ತ್ರೀಯು ತನ್ನ ತಲೆಯನ್ನು ಮುಸುಕಿನಿಂದ ಮುಚ್ಚಿಕೊಳ್ಳಬೇಕೆಂದು ಸತ್ಯವೇದ ಸ್ಪಷ್ಟವಾಗಿ ಹೇಳುತ್ತದೆ.
ಆರಾಧನೆಯ ಸಮಯದಲ್ಲಿ ಸ್ತ್ರೀಯು ಮುಸುಕನ್ನು ಧರಿಸುವ ಅಭ್ಯಾಸವು ಯೇಸು ಕಲಿಸಿದ ಮತ್ತು ಅಪೊಸ್ತಲ ಪೌಲನು ಬೋಧಿಸಿದ ಹೊಸ ಒಡಂಬಡಿಕೆಯ ನಿಯಮಗಳಲ್ಲಿ ಒಂದಾಗಿದೆ.
ಮುಸುಕಿನ ನಿಯಮವನ್ನು ಹಿಂಬಾಲಿಸುವುದು ದೇವರ ಚಿತ್ತವಾಗಿದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ