ಇಸ್ರಾಯೇಲ್ಯರು ತಮ್ಮ ವಿಗ್ರಹಾರಾಧನೆಯ ಬಗ್ಗೆ ಪಶ್ಚಾತ್ತಾಪಪಟ್ಟ ನಂತರ ಎರಡನೆಯ ಹತ್ತು ಆಜ್ಞೆಗಳನ್ನು ಪಡೆದರು ಮತ್ತು ಅವರು ದೇವರಿಂದ ಸರ್ವದೋಷಪರಿಹಾರವನ್ನು ಸ್ವೀಕರಿಸಿದ ಕಾರಣ ದೇವರು ಆ ದಿನವನ್ನು ಸರ್ವದೋಷಪರಿಹಾರಕ ದಿನ ಎಂದು ಹೆಸರಿಸಿದರು.
ಪವಿತ್ರ ಪಂಚಾಂಗದ ಪ್ರಕಾರ ಏಳನೇ ತಿಂಗಳ ಮೊದಲ ದಿನದಂದು ತುತೂರಿಗಳ ಹಬ್ಬವು ಪಶ್ಚಾತ್ತಾಪದ ತುತೂರಿಯನ್ನು ಗಟ್ಟಿಯಾಗಿ ಊದಿದಾಗ ಎಲ್ಲಾ ಜನರು ದೇವರಿಗೆ ಪಶ್ಚಾತ್ತಾಪ ಪಡಬೇಕೆಂದು ಸೂಚಿಸುವ ಹಬ್ಬವಾಗಿದೆ ಏಕೆಂದರೆ ಹತ್ತು ದಿನಗಳ ನಂತರ ಸರ್ವದೋಷಪರಿಹಾರಕ ದಿನವಾಗಿದೆ.
ಮೋಶೆಯ ಕಾಲದಲ್ಲಿ ಸರ್ವದೋಷಪರಿಹಾರಕ ದಿನಕ್ಕೆ ಹತ್ತು ದಿನಗಳ ಮೊದಲು ಇಸ್ರಾಯೇಲ್ಯರು ಪಶ್ಚಾತ್ತಾಪದ ತುತೂರಿಯನ್ನು ಊದಿದಂತೆಯೇ, ನಾವು ಈಗ ಇಡೀ ಲೋಕವನ್ನು ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಮತ್ತು ತಾಯಿ ದೇವರ ಬಳಿಗೆ ಬರುವುದಕ್ಕೆ ಕರೆಯಲು ಮತ್ತು ದೀಕ್ಷಾಸ್ನಾನ ಮತ್ತು ಹೊಸ ಒಡಂಬಡಿಕೆಯ ಹಬ್ಬಗಳ ಮೂಲಕ ಸಂಪೂರ್ಣ ಪಶ್ಚಾತ್ತಾಪವನ್ನು ಸಾಧಿಸಲು ತುತೂರಿಗಳನ್ನು ಊದಬೇಕು.
ನೀನು ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಬೇಕು - ಏಳನೆಯ ತಿಂಗಳಿನ ಮೊದಲನೆಯ ದಿನದಲ್ಲಿ ನಿಮಗೆ ಸಂಪೂರ್ಣ ವಿರಾಮವಿರಬೇಕು. ಅದನ್ನು ತುತೂರಿಗಳ ಧ್ವನಿಯಿಂದ ಪ್ರಕಟಪಡಿಸಬೇಕು. ದೇವಾರಾಧನೆಗಾಗಿ ಸಭೆಕೂಡಬೇಕು.
ಆ ದಿನದಲ್ಲಿ ಯಾವ ಉದ್ಯೋಗವನ್ನೂ ನಡಿಸಬಾರದು; ಯೆಹೋವನಿಗೆ ಹೋಮವನ್ನು ಮಾಡಬೇಕು.
ಯಾಜಕಕಾಂಡ 23:24-25
ಅದಕ್ಕೆ ಯೇಸು - ಕ್ಷೇಮದಿಂದಿರುವವರಿಗೆ ವೈದ್ಯನು ಬೇಕಾಗಿಲ್ಲ, ಕ್ಷೇಮವಿಲ್ಲದವರಿಗೆ ಬೇಕು;
ದೇವರ ಕಡೆಗೆ ತಿರುಗಿಕೊಳ್ಳಿರಿ ಎಂದು ನೀತಿವಂತರನ್ನು ಕರೆಯುವದಕ್ಕೆ ನಾನು ಬಂದವನಲ್ಲ, ಪಾಪಿಗಳನ್ನು ಕರೆಯುವದಕ್ಕೆ ಬಂದವನು ಎಂದು ಅವರಿಗೆ ಉತ್ತರಕೊಟ್ಟನು.
ಲೂಕನು 5:31-32
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ