ಕ್ರಿಸ್ತ ಅನ್ ಸಂಗ್ ಹೊಂಗ್ ರವರು 1918ರಲ್ಲಿ ಕೊರಿಯಾ ಗಣರಾಜ್ಯದ ಜಿಯೋಲ್ಲಾಬುಕ್-ಡೊದ ಜಂಗ್ಸು-ಗನ್ನಲ್ಲಿರುವ ಗಣಿಗಾರಿಕೆ ಪಟ್ಟಣದಲ್ಲಿ ಜನಿಸಿದರು. 2,000 ವರ್ಷಗಳ ಹಿಂದೆ ಯೇಸುವಿನ ಮೊದಲನೆಯ ಬರುವಿಕೆಯ ಸಮಯದಲ್ಲಿ, ಒಂದು ಮೂಕ ಪ್ರಾಣಿಯೂ ಸಹ ಅವನಿಗೆ ತನ್ನ ಕೊಟ್ಟಿಗೆಯನ್ನು ನೀಡಿತು ಮತ್ತು ಪೂರ್ವದಿಂದ ಬಂದ ಜೋಯಿಸರು ಆತನಿಗೆ ಚಿನ್ನ ಧೂಪ ರಕ್ತಬೋಳಗಳನ್ನು ಕಾಣಿಕೆಯಾಗಿ ಕೊಟ್ಟರು. ಎಷ್ಟಾದರೂ, ಅವರು ಎರಡನೆಯ ಸಾರಿ ಭೂಮಿಗೆ ಮನುಷ್ಯನಾಗಿ ಬಂದಾಗ, ಅವರು ಹುಟ್ಟಿದ ಕ್ಷಣದಿಂದ ಪರೀಕ್ಷೆಗಳು ಮತ್ತು ಕಷ್ಟಗಳನ್ನು ಅನುಭವಿಸಿದರು.
1918ರಲ್ಲಿ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು ಜನಿಸಿದಾಗ, ಇಡೀ ಲೋಕವನ್ನು ಮರಣದ ದುಃಸ್ವಪ್ನಕ್ಕೆ ತಳ್ಳಿದ ಮೊದಲನೆಯ ಮಹಾಯುದ್ಧ ಮುಗಿಯುವ ಮೊದಲೇ, ಇಡೀ ಭೂಮಿಯ ಮೇಲೆ ಮತ್ತೆ ಮರಣದ ನೆರಳು ಆವರಿಸಿತು. ಸ್ಪ್ಯಾನಿಷ್ ಜ್ವರವು ವಿಶ್ವದ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿಗೆ ಸೋಂಕು ತಗುಲಿ 50 ರಿಂದ 100 ದಶಲಕ್ಷ ಜನರನ್ನು ಕೊಂದಿತು. “ವೈದ್ಯಕೀಯ ಹತ್ಯಾಕಾಂಡ” ಎಂಬ ವಿಪತ್ತಿನ ಭಯಕ್ಕೆ ಕೊರಿಯಾ ಹೊರತಾಗಿರಲಿಲ್ಲ. ಒಂದು ಹಳ್ಳಿಯ ಎಲ್ಲಾ ಜನರು ಸೋಂಕಿಗೆ ಒಳಗಾಗಿದ್ದರು ಮತ್ತು ಶವಗಳನ್ನು ಹೂಳಲು ಯಾರೊಬ್ಬರು ಇರಲಿಲ್ಲ. ಸ್ಪ್ಯಾನಿಷ್ ಜ್ವರವು 7.6 ದಶಲಕ್ಷ ಅಂದರೆ 40ರಷ್ಟು ಕೊರಿಯನ್ ಜನರಿಗೆ ಸೋಂಕು ತಗುಲಿತು ಮತ್ತು ಅವರಲ್ಲಿ 140,000 ಜನರು ಸಾವನ್ನಪ್ಪಿದರು.
ಸೈತಾನನು ಇಡೀ ಮನುಕುಲದ ಜೀವಿಗಳ ಮೇಲೆ ಈ ಮರಣದ ಔತಣವನ್ನು ಭೂಮಿಯ ಮೇಲೆ ಯಾವ ಸ್ಥಳದಲ್ಲಿ ಏರ್ಪಡಿಸಿದನು?
ಸುಮಾರು 2,000 ವರ್ಷಗಳ ಹಿಂದೆ, ಯೇಸು ಜನಿಸಿದಾಗ, ರಾಜ ಹೆರೋದನು ಯೇಸುವನ್ನು ಕೊಲ್ಲಲು ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲಿನ ಎಲ್ಲಾ ಚಿಕ್ಕ ಗಂಡು ಮಕ್ಕಳ ಹತ್ಯಾಕಾಂಡವನ್ನು ಮಾಡಿದನು. ಅದೇ ರೀತಿ, ಪವಿತ್ರಾತ್ಮನ ಯುಗದಲ್ಲಿ, ಸೈತಾನನು ಎಲ್ಲಾ ಮಕ್ಕಳನ್ನು ಕೊಲ್ಲುವ ಮೂಲಕ ಎರಡನೆಯ ಬರುವಿಕೆಯ ಕ್ರಿಸ್ತನ ಜನನವನ್ನು ತಡೆಯಲು ಪ್ರಯತ್ನಿಸಿದನು (ಮತ್ತಾಯನು 2:13-16).
ಎಷ್ಟಾದರೂ, ಕತ್ತಲೆಯ ಶಕ್ತಿಯು ಸರ್ವಶಕ್ತ ದೇವರ ಉದ್ದೇಶ ಮತ್ತು ಚಿತ್ತವನ್ನು ಎಂದಿಗೂ ತಡೆಯಲು ಸಾಧ್ಯವಿಲ್ಲ.
ರಾಜ ದಾವೀದನ ಪ್ರವಾದನೆಗಳು ಮತ್ತು ಅಂಜೂರ ಮರದ ದೃಷ್ಟಾಂತದ ಪ್ರಕಾರ, ಕ್ರಿಸ್ತ ಅನ್ ಸಂಗ್ ಹೊಂಗ್ ರವರು 1918ರಲ್ಲಿ ಜನಿಸಿದರು ಮತ್ತು 1948ರಲ್ಲಿ ಮೂವತ್ತನೇ ವಯಸ್ಸಿನಲ್ಲಿ ದೀಕ್ಷಾಸ್ನಾನ ಪಡೆದರು ಮತ್ತು ಹೊಸ ಒಡಂಬಡಿಕೆಯ ಜೀವದ ಬೆಳಕನ್ನು ಪ್ರಕಾಶಿಸಿದರು.
ಸತ್ಯವೇದದ ಪ್ರವಾದನೆಯ ಪ್ರಕಾರ ಎರಡನೆಯ ಸಾರಿ ಬಂದ ಕ್ರಿಸ್ತ ಅನ್ ಸಂಗ್ ಹೊಂಗ್ ರವರನ್ನು ವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್ ನಂಬುತ್ತದೆ.
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ