ದೇವರು ಗಿದ್ಯೋನನ ಸೈನ್ಯವನ್ನು ಆರಿಸಿಕೊಂಡಾಗ, ಭಯಪಡುವವರನ್ನು ತಿರಸ್ಕರಿಸಿದನು. ಭಯಪಡಬೇಡ ಎಂದು ಅವರು ಯಾವಾಗಲೂ ಯೆಹೋಶುವನ ಸೈನ್ಯಕ್ಕೆ ಒತ್ತಿಹೇಳಿದರು. ಇದರ ಮೂಲಕ, ದೇವರ ವಾಗ್ದಾನಗಳನ್ನು ನಂಬುವದು ಮತ್ತು ಧೈರ್ಯದಿಂದ ಮುಂದೆ ಹೋಗುವದು ಅತ್ಯಂತ ಮುಖ್ಯವಾದ ವಿಷಯವಾಗಿದೆ ಎಂದು ನಾವು ನೋಡಬಹುದು.
ದೇವರ ವಾಗ್ದಾನಗಳಲ್ಲಿ ನಂಬಿಕೆಯಿಲ್ಲದ, ಕೆಟ್ಟ ವರದಿಯನ್ನು ಹರಡಿದ ಮತ್ತು ಕಾನಾನ್ ದೇಶದ ಬಗ್ಗೆ ದೂರು ನೀಡಿದ ಇಸ್ರಾಯೇಲ್ಯರಂತೆ, ನಾವು ಜನರಿಗೆ ಮತ್ತು ಪರಿಸರಕ್ಕೆ ಹೆದರಿ ಹಿಂಜರಿಯುತ್ತಿದ್ದರೆ, ನಾವು ಎಂದಿಗೂ ಆಧ್ಯಾತ್ಮಿಕ ಕೆನಾನ್ ಆದ ಪರಲೋಕ ರಾಜ್ಯವನ್ನು ಪ್ರವೇಶಿಸಲು ಸಾಧ್ಯವಾಗುವದಿಲ್ಲ. ಕ್ರಿಸ್ತ ಅನ್ ಸಂಗ್ ಹೊಂಗ್ ಮತ್ತು ತಾಯಿ ದೇವರು ನಮ್ಮನ್ನು ಆಶೀರ್ವದಿಸುವದಾಗಿ ನೀಡಿದ ವಾಗ್ದಾನವನ್ನು ನಂಬಿ ನಾವು ಧೈರ್ಯದಿಂದ ಪರಲೋಕರಾಜ್ಯದ ಸುವಾರ್ತೆಯನ್ನು ಬೋಧಿಸಿದಾಗ, ಇಡೀ ಲೋಕವನ್ನು ಆಶ್ಚರ್ಯಗೊಳಿಸುವ ಸುವಾರ್ತೆಯ ಅದ್ಭುತ ಕಾರ್ಯವು ನಡೆಯುತ್ತದೆ.
ಈ ಧರ್ಮಶಾಸ್ತ್ರವು ಯಾವಾಗಲೂ ನಿನ್ನ ಬಾಯಲ್ಲಿರಲಿ; ಹಗಲಿರುಳು ಅದನ್ನು ಧ್ಯಾನಿಸುತ್ತಾ ಅದರಲ್ಲಿ ಬರೆದಿರುವದನ್ನೆಲ್ಲಾ ಕೈಕೊಂಡು ನಡಿ. ಆಗ ನಿನ್ನ ಮಾರ್ಗದಲ್ಲೆಲ್ಲಾ ಸಫಲನಾಗುವಿ, ಕೃತಾರ್ಥನಾಗುವಿ. ನಾನು ನಿನಗೆ ಆಜ್ಞಾಪಿಸಿದ್ದೇನಲ್ಲಾ; ಸ್ಥಿರಚಿತ್ತನಾಗಿರು, ಧೈರ್ಯದಿಂದಿರು. ಅಂಜಬೇಡ, ಕಳವಳಗೊಳ್ಳಬೇಡ. ನೀನು ಹೋಗುವಲ್ಲೆಲ್ಲಾ ನಿನ್ನ ದೇವರಾದ ಯೆಹೋವನು ನಿನ್ನ ಸಂಗಡ ಇರುತ್ತಾನೆ ಎಂದು ಹೇಳಿದನು.
ಯೆಹೋಶುವ 1:8-9
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ