ಪರ್ಣಶಾಲೆಗಳ ಹಬ್ಬವು, ಆಲಯವನ್ನು ಪೂರ್ಣಗೊಳಿಸುವ ಆಚರಣೆಯ ಹಬ್ಬವಾಗಿದೆ.
ಮೋಶೆ ಮತ್ತು ಇಸ್ರಾಯೇಲ್ಯರು ದೇವರ ಚಿತ್ತಕ್ಕೆ ವಿಧೇಯರಾಗಿ, ಹತ್ತು ಆಜ್ಞಾ ಶಾಸನಗಳನ್ನು ಇಡಲು ಪರ್ಣಶಾಲೆಯನ್ನು ಕಟ್ಟುತ್ತಿದ್ದಾಗ, ಜನರು ಪ್ರೇರಿತರಾಗಿ ಸಂತೋಷದಿಂದ ಆಲಯವನ್ನು ಕಟ್ಟಲು ಎಲ್ಲಾ ರೀತಿಯ ಸಾಮಾಗ್ರಿಗಳನ್ನು
ತಂದು ಕೊಟ್ಟರು. ಇದು ಪರ್ಣಶಾಲೆಗಳ ಹಬ್ಬದ ಉತ್ಪತ್ತಿಯಾಯಿತು.
ಚರ್ಚ್ ಆಫ್ ಗಾಡ್ ಸದಸ್ಯರು ಆಧ್ಯಾತ್ಮಿಕ ಆಲಯಕ್ಕೆ ಬೇಕಾದ ಸಾಮಾಗ್ರಿಗಳನ್ನು ಕೂಡಿಸುತ್ತಿದ್ದಾರೆ.
ಯೇಸು ಸುವಾರ್ತೆ ಸಾರುವ ಮೂಲಕ ಪರಲೋಕದ ಆಲಯಕ್ಕೆ ಸಾಮಾಗ್ರಿಗಳನ್ನು ಕೂಡಿಸಿದರು.
ಈ ಕಾಲದ ಪರ್ಣಶಾಲೆಗಳ ಹಬ್ಬದ ನಿಜವಾದ ಅರ್ಥವೆಂದರೆ, ಆಧ್ಯಾತ್ಮಿಕ ಆಲಯದ ಸಾಮಾಗ್ರಿಗಳಾದ
ನಮ್ಮ ಪರಲೋಕ ಕುಟುಂಬದ ಸದಸ್ಯರನ್ನು ಹುಡುಕಿ, ಅವರನ್ನು ತಂದೆ ತಾಯಿಯ ಬಳಿಗೆ ಮುನ್ನಡೆಸಿ,
ಪರಲೋಕದ ಆಲಯವನ್ನು ಪೂರ್ಣಗೊಳಿಸುವುದಾಗಿದೆ.
“ಆತನಲ್ಲಿ ಕಟ್ಟಡದ ಎಲ್ಲಾ ಭಾಗಗಳು ಒಂದಕ್ಕೊಂದು ಹೊಂದಿಕೆಯಾಗಿ ಕಟ್ಟಡವು ವೃದ್ಧಿಯಾಗುತ್ತಾ ಕರ್ತನಲ್ಲಿ ಪರಿಶುದ್ಧ ದೇವಾಲಯವಾಗುತ್ತದೆ. ಆತನಲ್ಲಿ ನೀವು ಸಹ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವದಕ್ಕಾಗಿ ನಮ್ಮ ಸಂಗಡ ಕಟ್ಟಲ್ಪಡುತ್ತಾ ಇದ್ದೀರಿ.” ಎಫೆಸದವರಿಗೆ 2:21–22
ಪಿ.ಓ. ಬಾಕ್ಸ್ 119, ಸೊಂಗ್ನಮ್ ಬುಂದಂಗ್ ಅಂಚೆ ಕಛೇರಿ, ಬುಂದಂಗ್-ಗು, ಸೊಂಗ್ನಮ್-ಸಿ, ಗ್ಯಂಗಿ-ದೊ, ಕೊರಿಯಾ
Tel 031-738-5999 Fax 031-738-5998
ಮುಖ್ಯಕಛೇರಿ : ಸುನೆ-ಲೋ 50(ಸುನೆ-ದೊಂಗ್),ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ಪ್ರತಿನಿಧಿ ಸಭೆ : ಪಾಂಗ್ಯೋ ಯಕ್-ಲೋ 35(ಬೆಕ್ ಹ್ಯಾನ್-ದೊಂಗ್ 526), ಬುಂದಂಗ್-ಗು, ಸಂಗ್ನಾಮ್-ಸಿ, ಗ್ಯಾಂಗಿ-ಡೊ
ⓒವರ್ಲ್ಡ್ ಮಿಷನ್ ಸೊಸೈಟಿ ಚರ್ಚ್ ಆಫ್ ಗಾಡ್. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ. ಗೌಪ್ಯತಾ ನೀತಿ